ಕೃಷಿಯೇತರ, ವಿವಿಧೋದ್ದೇಶ ಸಹಕಾರ ಸಂಸ್ಥೆಗಳಿಗೆ ಅನ್ವಯ ಸಹಕಾರಿ ಸಂಘಗಳ ಸಾಲದ ಬಡ್ಡಿಗೆ ಸರಕಾರ ಲಗಾಮು

ಕೃಷಿಯೇತರ, ವಿವಿಧೋದ್ದೇಶ ಸಹಕಾರ ಸಂಸ್ಥೆಗಳಿಗೆ ಅನ್ವಯ 

ಸಹಕಾರಿ ಸಂಘಗಳ ಸಾಲದ ಬಡ್ಡಿಗೆ ಸರಕಾರ ಲಗಾಮು 



ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಮತ್ತು ವಿವಿಧೋದ್ದೇಶ ಸಹಕಾರ ಸಂಘಗಳು ಸಂಗ್ರಹಿಸುತ್ತಿರುವ ಠೇವಣಿಗೆ ಮತ್ತು ವಿತರಿಸುವ ಸಾಲದ ಬಡ್ಡಿ ದರಕ್ಕೆ ರಾಜ್ಯ ಸರಕಾರ ಲಗಾಮು ಹಾಕಿ ಆದೇಶ ಹೊರಡಿಸಿದೆ.ಏ . 1 ರಿಂದಲೇ ಈ ಹೊಸ ನಿಯಮ ಜಾರಿಗೆ ಬರುವಂತೆ ಸ್ಪಷ್ಟವಾಗಿ ನಿರ್ದೇಶಿಸಲಾಗಿದೆ

    ಸಾಲಗಾರರ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, ವಿವಿಧೋದ್ದೇಶ  ಸಹಕಾರ ಸಂಘಗಳಿಗೆ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮದಡಿ ಸರಕಾರಕ್ಕೆ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಲಾಗಿದೆ.

    ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ 1934 ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯಿದೆ 1949 ಹಾಗೂ ಸಹಕಾರ ಸಂಘಗಳ ನಿಬಂಧಕರ ಸೂಚನೆಗಳನ್ನು ಉಲ್ಲಂಘಿಸದಿರಲು ಕೃಷಿಯೇತರ ಪತ್ತಿನ ಸಹಕಾರ ಸಂಘಗಳಿಗೆ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ. ಆದರೆ ಆ ಸೂಚನೆಗಳನ್ನು ಪಾಲಿಸದಿರುವುದು ಆರ್ ಬಿಐ ಗಮನಕ್ಕೆ ಬಂದಿದೆ.

whatss

ಆದೇಶದಲ್ಲಿರುವ ಇತರೆ ನಿರ್ದೇಶನಗಳು   

* ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಾನಾ ಪ್ರಕಾರದ ಠೇವಣಿ ಮೇಲೆ ನಾನಾ ಅವಧಿಗೆ ನಿಗದಿಪಡಿಸುವ ಬಡ್ಡಿ ದರ ಅಥವಾ ಅದರ ಮೇಲೆ ಶೇ.2 ರಷ್ಟು ಅಧಿಕ ಬಡ್ಡಿಯನ್ನು ಮಾತ್ರ ನಿಗದಿಪಡಿಸತಕ್ಕದ್ದು.

* ಹಿರಿಯ ನಾಗರಿಕರ ಠೇವಣಿ ಮೇಲೆ ಶೇ .0.50ರಷ್ಟು ಅಧಿಕ ಬಡ್ಡಿಯನ್ನು ನಿಗದಿಪಡಿಸಬಹುದಾಗಿದೆ.

* ಪಿಗ್ಮಿ ಠೇವಣಿ ಸಂಗ್ರಹ ಮೇಲೆ ಶೇ . 3ಕ್ಕಿಂತ ಹೆಚ್ಚು ಕಮಿಷನರ್ ನೀಡುವಂತಿಲ್ಲ.


* ಪ್ರಾಥಮಿಕ ಸಹಕಾರ ಸಂಘ ಹಾಗೂ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ರಚಿಸಲಾದ ಫರ್ಮ್, ಕಂಪನಿ ಅಥವಾ ಯಾವುದೇ ಇತರ ರೀತಿಯಲ್ಲಿ ಠೇವಣಿ ಸಂಗ್ರಹಿಸುವಂತಿಲ್ಲ.

* ಸಂಘದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುವಂತಿಲ್ಲ.

* ಸಹಕಾರ ಸಂಸ್ಥೆಗಳು ಸ್ಥಾನಿಕ ಹಣಕಾಸು ಸಂಸ್ಥೆಗಳಾಗಿದ್ದು, ಇಂತಹ ಸಹಕಾರ ಸಂಸ್ಥೆಗಳಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಮುಖಾಂತರ ಕಮಿಷನ್, ಇನ್ ಸೆಂಟಿವ್ ಕೊಡುವುದರ ಮೂಲಕ ಠೇವಣಿ ಸ್ವೀಕರಿಸುವಂತಿಲ್ಲ.

* ಹೆಚ್ಚುವರಿ ಸಂಪನ್ಮೂಲವನ್ನು ಕಡ್ಡಾಯವಾಗಿ ಅಪೆಕ್ಸ್ ಬ್ಯಾಂಕ್ ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡತಕ್ಕದ್ದು.

* ವಿತರಿಸುವ ಸಾಲಗಳಿಗೆ ಶೇ. 12ರಷ್ಟು ಬಡ್ಡಿ ಮಿರತಕ್ಕದ್ದಲ್ಲ.ಸುಸ್ತಿ ಪ್ರಕರಣಗಳಲ್ಲಿ ಹೆಚ್ಚುವರಿಯಾಗಿ ಗರಿಷ್ಠ ಶೇ ೨ರಷ್ಟು ಬಡ್ಡಿದರ ಮಿರತಕ್ಕದ್ದಲ್ಲ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು