ಫ್ಯಾಕ್ಟರಿನಲ್ಲಿ ಕಬ್ಬಿನಿಂದ ಸಕ್ಕರೆ ಹೇಗೆ ತಯಾರಿಸಲಾಗುತ್ತೆ ಎಂಬುದು ತಿಳಿದಿದಿಯಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ಜೊತೆ ವಿಡಿಯೋ ....
ಕಬ್ಬನ್ನು ಅದರ ಸಿಪ್ಪೆ ಸುಲಿದು ನೇರವಾಗಿಯೂ ತಿನ್ನಬಹುದು, ಇಲ್ಲವಾದರೆ ಈ ಕಬ್ಬಿನ ರಸವನ್ನು ಕುಡಿಯಬಹುದಾಗಿದೆ. ಬೇಸಿಗೆಯ ಸಮಯದಲ್ಲಿ ಹೆಚ್ಚಿನವರು ಕಬ್ಬಿಣ ರಸದ ಮೊರೆ ಹೋಗುತ್ತಾರೆ. ಕಬ್ಬಿಣ ರಸವು ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಕಬ್ಬಿನಿಂದ ದಿನನಿತ್ಯದ ಬಳಸುವ ಸಕ್ಕರೆ ಹಾಗೂ ಬೆಲ್ಲವನ್ನು ತಯಾರಿಸಲಾಗುತ್ತದೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಕಬ್ಬನ್ನು ಎಲ್ಲರೂ ಕೂಡ ಇಷ್ಟ ಪಡುತ್ತಾರೆ. ಹೌದು ಕರ್ನಾಟಕದಲ್ಲಿ ಕಬ್ಬನ್ನು ರೈತರು ಹೆಚ್ಚು ಬೆಳೆಯುತ್ತಾರೆ. ಕಬ್ಬು ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ನೀರು ಬಸಿದು ಹೋಗುವಂತಹ ಮಧ್ಯಮ ಕಪ್ಪು ಮಿಶ್ರಿತ ಮಣ್ಣಿನಲ್ಲಿ ಈ ಬೆಳೆಯನ್ನು ಬೆಳೆಯಬೇಕು. ದೇಶದಲ್ಲಿ ಈ ಬೆಳೆಯನ್ನು 5.06 ದಶಲಕ್ಷ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು, ಒಟ್ಟು ಉತ್ಪಾದನೆ 36,110 ದಶಲಕ್ಷ 4.20 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು379.0 ಲಕ್ಷ ಟನ್ ಉತ್ಪಾದನೆಯನ್ನು ಕಾಣಬಹುದು. ಈ ಕಬ್ಬಿನಲ್ಲಿ ನಿರೋಧಕಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ಕಬ್ಬು ಸಕ್ಕರೆಯಾಗಿ ಪರಿವರ್ತನೆಯಾಗುವ ವಿಧಾನ :
ಈ ವಿಡಿಯೋ ದಲ್ಲಿ ಸಕ್ಕರೆಯನ್ನು ತಯಾರಿಸುವ ಸಂಪೂರ್ಣವಾದ ಮಾಹಿತಿಯಿದೆ. ಇಲ್ಲಿ ಕಾಣಿಸುವಂತೆ ಕಬ್ಬನ್ನು ಹೊಸದಾಗಿ ಜಮೀನುಗಳಿಂದ ಕಟಾವು ಮಾಡಿ ತೂಕ ಮಾಡಲಾಗುತ್ತಿದೆ. ತದನಂತರ ಕಬ್ಬನ್ನು ಕನ್ವೇಯರ್ ಬೆಲ್ಟ್ ಗಳ ಮೇಲೆ ಇರಿಸಿ, ಅದಾದ ಬಳಿಕ ಯಂತ್ರಕ್ಕೆ ಕತ್ತರಿಸಲು ಕಳುಹಿಸಲಾಗುತ್ತಿದೆ. ಯಂತ್ರವು ಸಣ್ಣದಾಗಿ ತುಂಡು ಮಡಿದ ಕಬ್ಬನ್ನು ನೀಡುವುದನ್ನು ಕಾಣುತ್ತೇವೆ.
ಕತ್ತರಿಸಿದ ಕಬ್ಬನ್ನು ಬೃಹತ್ ರೊಲುರುಗಳ ಮೂಲಕ ತಳ್ಳಲಾಗಿದ್ದು, ಈ ರೋಲರ್ ಒತ್ತಡ ಹಾಕಿದಾಗ ರಸವನ್ನು ಹೊರತೆಗೆಯಲು ಸಹಾಯ ಮಾಡುತ್ತದೆ.
ಕೊನೆಗೆ ಎಲ್ಲಾ ರಸವನ್ನು ಕಬ್ಬಿನಿಂದ ಹೊರತೆಗೆಯಲಾಗಿದೆ. ಈ ರಸವನ್ನು ಉಗಿಯೊಂದಿಗೆ ಸಂಸ್ಕರಿಸಲಾಗುತ್ತಿದೆ. ಅದರ ಜೊತೆಗೆ ಸಲ್ಫರ್ & ಸುಣ್ಣವನ್ನು ಬೆರೆಸಲಾಗುತ್ತಿದೆ. ಮತ್ತೆ ಉಗಿಯೊಂದಿಗೆ ಬಿಸಿ ಮಾಡಲಾಗುತ್ತಿದೆ.
ತದನಂತರದಲ್ಲಿ ರಸವನ್ನು ಸ್ವಲ್ಪ ಸಮಯದವರೆಗೆ ಬಿಡಲಾಗಿದ್ದು, ಇದರಿಂದ ಕಲ್ಮಶಗಳು ಒಂದೆಡೆ ನಿಲ್ಲುತ್ತದೆ. ಈ ಕಬ್ಬಿಣ ರಸದ ತೇವಾಂಶವನ್ನು ತೆಗೆದು ಹಾಕಲು ಶುದ್ಧ ರಸವನ್ನು ಆವಿಯಾಗಿಸುವ ಮೂಲಕ ಸಂಸ್ಕರಿಸಲಾಗುತ್ತಿದೆ. ರಸವನ್ನು ದಪ್ಪವಾದ ಸಕ್ಕರೆ ಪಾಕವಾಗಿ ಮಾಡಲಾಗುತ್ತಿದ್ದು, ನಂತರ ಸಿರಪ್ ಅನ್ನು ಸ್ಪಟಿಕೀಕರಣಕ್ಕಾಗಿ ಬೇರೆ ಕಡೆಗೆ ಹಾಕಲಾಗುತ್ತಿದೆ. ಸಸಕ್ಕರೆ ಪಾಕವನ್ನು ಮತ್ತಷ್ಟು ಟ್ಯಾಂಕ್ ಗಳಲ್ಲಿ ಕುದಿಸಲಾಗಿದ್ದು, ಸಕ್ಕರೆಯ ಹರಳುಗಳನ್ನು ರೂಪಿಸಲು ಪ್ರಾರಂಭಿಸಲಾಗಿದೆ.
ಸ್ಪಟಿಕೀಕರಿಸಿದ ಸಕ್ಕರೆಯನ್ನು ಮತ್ತಷ್ಟು ಉಗಿಗೆ ಸಂಸ್ಕರಿಸಲಾಗಿದ್ದು ಸಿಹಿ ಸಿಹಿಯಾದ ಸಕ್ಕರೆಯು ಸಿದ್ಧವಾಗಿದೆ. ಹೀಗೆ ಲಭ್ಯವಾಗುವ ಸಕ್ಕರೆ ದಿನನಿತ್ಯದ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆದರೆ ದಿನಕ್ಕೆ 6 ಕ್ಕೂ ಟೀ ಚಮಚ ಸಕ್ಕರೆ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೀಗಾಗಿ ಸಕ್ಕರೆಯ ಸೇವನೆಯು ಇತಿಮಿತಿಯಲ್ಲಿದ್ದರೆ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.
ಸಕ್ಕರೆ ತಯಾರಿಕೆಯ ವಿಡಿಯೋ >>>
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Social